Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

RailCal Android   RailCal iPhone

site support

बिहार संपर्क क्रांति : मिथिला पेंटिंग की सुंदरता और तेज रफ्तार - Keshav Singh

Search Forum
<<prev entry    next entry>>
Blog Entry# 1199504
Posted: Aug 27 2014 (23:11)

1 Responses
Last Response: Aug 28 2014 (12:42)
General Travel
743 views
0

Aug 27 2014 (23:11)  
 
Mahaveer Jain^~
Mahaveer Jain^~   11589 blog posts
Entry# 1199504               Past Edits
Nod for decongesting kempegowda majestic bus stand bengaluru city (SBC)-
relief for commoners!
ಮುಕ್ಕಾಲು ಕರ್ನಾಟಕಕ್ಕಿನ್ನು ಪೀಣ್ಯದಿಂದ ಬಸ್‌ ಸಂಚಾರ
ಸೆ.1ರಿಂದ ಉತ್ತರ ಕರ್ನಾಟಕ, ಮಂಗಳೂರು, ಶಿವಮೊಗ್ಗ, ತುಮಕೂರು ಬಸ್‌ಗಳು ಬೆಂಗಳೂರಿನ ಮೆಜೆಸ್ಟಿಕ್‌ಗೆ ಬರಲ್ಲ
Udayavani | Aug 22, 2014
ಸೆ.1ರಿಂದ
...
more...
ಉತ್ತರ ಕರ್ನಾಟಕ, ಮಂಗಳೂರು, ಶಿವಮೊಗ್ಗ, ತುಮಕೂರು ಬಸ್‌ಗಳು ಬೆಂಗಳೂರಿನ ಮೆಜೆಸ್ಟಿಕ್‌ಗೆ ಬರಲ್ಲ
ಪೀಣ್ಯಕ್ಕೆ ಬೆಂಗಳೂರಿನ ವಿವಿಧೆಡೆಯಿಂದ ಸಿಟಿ ಬಸ್‌ ಸೌಕರ್ಯ
ಪೀಣ್ಯದಲ್ಲಿ ಹೊಸ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಉದ್ಘಾಟನೆ
ಬೆಂಗಳೂರು: ಬೆಂಗಳೂರಿನಿಂದ ಉತ್ತರ ಕರ್ನಾಟಕ, ಶಿವಮೊಗ್ಗ, ಮಂಗಳೂರು, ತುಮಕೂರಿಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಹೋಗುವ ಪ್ರಯಾಣಿಕರೇ ಗಮನಿಸಿ. ಸೆ.1ರಿಂದ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್‌ನಲ್ಲಿ ನಿಮಗೆ ಈ ಊರುಗಳಿಗೆ ತೆರಳುವ ಬಸ್‌ಗಳು ಸಿಗುವುದಿಲ್ಲ. ಮೆಜೆಸ್ಟಿಕ್‌ನಿಂದ 11 ಕಿ.ಮೀ. ದೂರದ ಪೀಣ್ಯದಲ್ಲಿ ಹೊಸದಾಗಿ ನಿರ್ಮಿಸಿರುವ ಬಸ್‌ನಿಲ್ದಾಣದಿಂದ ಈ ಬಸ್‌ಗಳು ಸಂಚರಿಸಲಿವೆ.
ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ವಾಹನ ದಟ್ಟಣೆ ತಗ್ಗಿಸಲು ಸೆ.1ರಿಂದ ತುಮಕೂರು ಮಾರ್ಗದ ಸುಮಾರು 20 ಜಿಲ್ಲೆಗಳ ಬಸ್‌ಗಳು ಪೀಣ್ಯ ಬಸ್‌ ನಿಲ್ದಾಣದಿಂದ ಹೊರಡಲಿವೆ. ಗುರುವಾರ ಈ ಹೊಸಬಸ್‌ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಇಷ್ಟೇ ಅಲ್ಲದೆ ಈ ನಿಲ್ದಾಣಕ್ಕೆ 'ಬಸವೇಶ್ವರ ಬಸ್‌ ನಿಲ್ದಾಣ' ಎಂದು ಹೆಸರಿಡಲಾಗಿದೆ.
20 ಜಿಲ್ಲೆಗಳಿಗೆ ಸದ್ಯ ಮೆಜೆಸ್ಟಿಕ್‌ನಿಂದ ಪ್ರತಿನಿತ್ಯ ಸಂಚರಿಸುತ್ತಿರುವ 1,021 ಬಸ್‌ಗಳು ಹಂತ-ಹಂತವಾಗಿ ಈ ಬಸ್‌ ನಿಲ್ದಾಣಕ್ಕೆ ವರ್ಗಾವಣೆ ಆಗಲಿವೆ.
ಮೊದಲ ಹಂತವಾಗಿ ಹುಬ್ಬಳ್ಳಿ ವಲಯದ 136 ವೇಗದೂತ ಸಾರಿಗೆಗಳು, ನಂತರ ಹೊಸಪೇಟೆ ಮತ್ತು ಬಳ್ಳಾರಿಯ 151, ಶಿವಮೊಗ್ಗದ 150, ಹಾಸನ ವಲಯದ 416 ವೇಗದೂತ ಸಾರಿಗೆಗಳು ಇಲ್ಲಿಂದ ನಿರ್ಗಮಿಸಲಿವೆ. ಕೊನೆ ಹಂತದಲ್ಲಿ ತುಮಕೂರು ಮತ್ತು ಪಾವಗಡ ವಲಯದ 168 ವೇಗದೂತ ಸಾರಿಗೆಗಳು ಸ್ಥಳಾಂತ ರಗೊಳ್ಳಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪೀಣ್ಯ ತಲುಪುವುದು ಹೇಗೆ?: ಪ್ರಸ್ತುತ ಮೆಜೆಸ್ಟಿಕ್‌ನಿಂದ ಅಂದಾಜು ಪ್ರತಿನಿತ್ಯ 2,500 ಶೆಡ್ಯುಲ್‌ಗ‌ಳು (ಬಸ್‌ ಓಡಾಟ) ಕಾರ್ಯಾಚರಣೆ ಮಾಡುತ್ತಿವೆ. ಪೀಣ್ಯ ಬಸವೇಶ್ವರ ಬಸ್‌ ನಿಲ್ದಾಣದ ಆರಂಭದಿಂದಾಗಿ ಮೆಜೆಸ್ಟಿಕ್‌ನಲ್ಲಿ 1,400 ಶೆಡ್ಯುಲ್‌ಗ‌ಳು ಮಾತ್ರ ಉಳಿಯುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಪೀಣ್ಯ ಬಸ್‌ ನಿಲ್ದಾಣ ಮತ್ತು ಕೆಂಪೇಗೌಡ ಬಸ್‌ ನಿಲ್ದಾಣದ ನಡುವೆ 38 ಸಂಪರ್ಕ ಸಾರಿಗೆಗಳು ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದಿಂದ ಸಂಚಾರ ಮಾಡಲಿವೆ. ಹಾಗೂ ನಗರದ ವಿವಿಧ ಬಡಾವಣೆಗಳಿಂದ ಪೀಣ್ಯ ಬಸ್‌ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗುವುದು. ಅಷ್ಟೇ ಅಲ್ಲ, ವರ್ಗಾಯಿಸಲು ಯೋಜಿಸಿರುವ ಸಾರಿಗೆಗಳಿಗೆ ಎರಡು ಹಂತಗಳ ಪ್ರಯಾಣ ದರವನ್ನೂ ಕಡಿಮೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ. ನೆಲಮಂಗಲ ಘಟಕದಿಂದ ಕೆಲ ಅಂತಾರಾಜ್ಯ ಸಾರಿಗೆಗಳಾದ ತಿರುಪತಿ ಮತ್ತು ತಮಿಳುನಾಡು ಹಾಗೂ ಮೈಸೂರು ಕಡೆಯ ಸಾರಿಗೆಗಳನ್ನು ಪೀಣ್ಯ ಬಸ್‌ ನಿಲ್ದಾಣದಿಂದ ರಿಂಗ್‌ ರಸ್ತೆ ಮೂಲಕ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ. ನೂತನ ಬಸ್‌ ನಿಲ್ದಾಣದ ತುಸು ದೂರದಲ್ಲೇ ಪೀಣ್ಯ ಕೈಗಾರಿಕಾ ಪ್ರದೇಶದ ಮೆಟ್ರೋ ನಿಲ್ದಾಣವೂ ಇದೆ. ಪ್ರಯಾಣಿಕರು ರಾತ್ರಿ 10.30ರವರೆಗೆ ಮೆಟ್ರೋ ರೈಲು ಏರಿ, ಅಲ್ಲಿಂದಲೂ ಯಶವಂತಪುರ, ಮೈಸೂರು ಸ್ಯಾಂಡಲ್‌ ಸೋಪು ಕಾರ್ಖಾನೆ, ಮಹಾಲಕ್ಷ್ಮೀ ಲೇಔಟ್‌, ರಾಜಾಜಿನಗರ, ಮಲ್ಲೇಶ್ವರದ ಮಂತ್ರಿಸ್ಕ್ವೇರ್‌ಗೆ ಬಂದಿಳಿಯಬಹುದು.
ನಿಲ್ದಾಣದ ವಿಶೇಷತೆಗಳು: ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆ ಹಾಗೂ ಜಾಗದ ಕೊರತೆ ಹಿನ್ನೆಲೆಯಲ್ಲಿ ಶಾಂತಿನಗರ, ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಮಾದರಿಯಲ್ಲಿ ಪೀಣ್ಯದಲ್ಲಿ 6 ಎಕರೆ 22 ಗುಂಟೆ ವಿಸ್ತೀರ್ಣದಲ್ಲಿ 39.25 ಕೋಟಿ ರೂ. ವೆಚ್ಚದಲ್ಲಿ ಸ್ಯಾಟಲೈಟ್‌ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ನೂತನ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಬಿಎಂಟಿಸಿ ಬಸ್‌ ನಿಲ್ದಾಣ, ವಾಣಿಜ್ಯ ಸಮುಚ್ಚಯ, ಪಾರ್ಕಿಂಗ್‌, ಸುಸಜ್ಜಿತ ಶೌಚಾಲಯ, ಮುಂಗಡ ಟಿಕೆಟ್‌ ಕಾಯ್ದಿರಿಸುವ ಕೌಂಟರ್‌, ಉಪಾಹಾರ ಗೃಹ, ಲಗೇಜ್‌ ಕೊಠಡಿ, ಪ್ರಯಾಣಿಕರು ಕಾಯುವ ಹಜಾರ, ವಿಶ್ರಾಂತಿ ಕೊಠಡಿಗಳಿವೆ.
ನಿಲ್ದಾಣಕ್ಕೆ ಬಸವಣ್ಣನ ಹೆಸರು
ಪೀಣ್ಯ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ 'ಬಸವೇಶ್ವರ ಬಸ್‌ ನಿಲ್ದಾಣ' ಎಂದು ನಾಮ ಕರಣ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಬಸ್‌ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ರಸ್ತೆಯಲ್ಲಿ ಬಹುತೇಕ ಉತ್ತರ ಕರ್ನಾಟಕದ ಜನರೇ ಪ್ರಯಾಣಿಸುವುದರಿಂದ ಬಸವೇಶ್ವರ ಬಸ್‌ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದರು.

Translate to English
Translate to Hindi

604 views
0

Aug 28 2014 (12:42)
Mahaveer Jain^~   11589 blog posts
Re# 1199504-1              
after RM gowdaji nod to decongest majestic and ypr terminals with inception of byappanahalli,bengaluru cantonment terminals
even ksrtc started to detraffic bengaluru central district
Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy