Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Topic
 #
 Rating
 Correct
 Wrong
 Stamp
 PNR Ref
 PNR Req
 Blank PNRs
 HJ
 Vote
 Pred
 @
 FM Alert
 FM Approval
 Pvt

Godan Express: गोदान एक्सप्रेस - प्रेमचन्द की लेखनी ने रची यह अनुपम कृति, ये जोड़े मुंबई से पूंर्वांचली संस्कृति ।। - Saurabh

Search Forum
<<prev entry    next entry>>
Blog Entry# 1527338
Posted: Jun 29 2015 (09:13)

1 Responses
Last Response: Jun 29 2015 (09:15)
Social
1520 views
0

Jun 29 2015 (09:13)  
 
krishnaprasad~
krishnaprasad~   3092 blog posts
Entry# 1527338              
ತ್ತೂರು : ಮಂಗಳೂರು-ಬೆಂಗಳೂರು ನಡುವಣ ಮೈಸೂರು ಮೂಲಕ ಸುತ್ತು ಬಳಸು ದಾರಿಯಲ್ಲಿ ಪ್ರಯಾಣಿಕ ರೈಲು ನಿತ್ಯ ಓಡುತ್ತಿದೆ. ಮೊದಲೇ ಹೆಚ್ಚು ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಹಾಸನ-ಬೆಂಗಳೂರು ನೇರ ರೈಲು ಮಾರ್ಗ ಪೂರ್ಣಗೊಳ್ಳುವ ತನಕ ಬೆಂಗಳೂರು ಯಾನ ಸುತ್ತು ಬಳಸಿ ನಡೆಯುತ್ತಿದೆ. ಆದರೆ ಈಗ ಈ ಯಾನ ನಿತ್ಯ ವಿಳಂಬವಾಗುತ್ತಿದೆ. ಪ್ರಯಾಣಿಕರು ತಾಸುಗಟ್ಟಲೆ ಸಮಯ ವ್ಯರ್ಥ ಮಾಡುತ್ತಿದ್ದಾರೆ.
ಸಮಯಕ್ಕೆ ಸರಿಯಾಗಿ ಬಾರದ ರೈಲಿಗಾಗಿ ಅಂಗವಿಕಲರು, ವೃದ್ಧರು, ಮಕ್ಕಳು, ಮಹಿಳೆಯರು ಹೀಗೆ ಎಲ್ಲ ವರ್ಗದ ಪ್ರಯಾಣಿಕರು ತಮ್ಮ ಊರುಗಳ ರೈಲು ನಿಲ್ದಾಣಗಳಲ್ಲಿ ಕಾಯುವ ಪ್ರಮೇಯ ಎದುರಾಗಿದೆ. ಉದಾಹರಣೆಗೆ ಶನಿವಾರ ರಾತ್ರಿ 10.15ಕ್ಕೆ ಕಬಕ ಪುತ್ತೂರು ರೈಲು ನಿಲ್ದಾಣಕ್ಕೆ ಬರಬೇಕಾಗಿದ್ದ ಕಾರವಾರ-ಯಶವಂತಪುರ ಪ್ರಯಾಣಿಕ ರೈಲು ತಡರಾತ್ರಿ 1.45ಕ್ಕೆ ಆಗಮಿಸಿದೆ. ಯಶವಂತಪುರ-ಕಾರವಾರ ಮತ್ತು ಕಣ್ಣೂರು ರೈಲು ರವಿವಾರ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಬಂದರೆ 6.30ಕ್ಕೆ ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ ರೈಲು ಬೆಳಗ್ಗೆ 8.40ಕ್ಕೆ ವಿಳಂಬವಾಗಿ ಆಗಮಿಸಿದೆ.
ಮಳೆಗಾಲದ
...
more...
ದಿನಗಳಲ್ಲಿ ಈ ರೈಲು ಪ್ರಯಾಣ ಪ್ರತೀವರ್ಷ ಇದೇ ರೀತಿ ವಿಳಂಬದಿಂದ ನಡೆಯುತ್ತಿದೆ. ಇದಕ್ಕೆ ತಾಂತ್ರಿಕ ಕಾರಣಗಳು ಇದ್ದರೂ ರೈಲು ಯಾನದ ವಿಳಂಬಕ್ಕೆ ತಾಂತ್ರಿಕ ಕಾರಣಗಳೇ ಸಂಪೂರ್ಣ ಹೊಣೆ ಎಂದು ಹೇಳಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಜಾರಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಬೇರೆ ಕಾರಣಗಳು ಕೂಡ ಇವೆ. ರೈಲು ಯಾನದ ವಿಳಂಬದ ಹಿಂದೆ ಇಲಾಖೆಯ ಸ್ವಯಂಕೃತ ಅಪರಾಧ ಕೂಡ ಇದೆ. ಇದನ್ನು ಮಾತ್ರ ಒಪ್ಪಿಕೊಳ್ಳಲು ಯಾರೂ ಸಿದ್ಧರಿಲ್ಲ.
ವಿಳಂಬಕ್ಕೆ ಕಾರಣ ಏನು?
ಕೊಂಕಣ ರೈಲು ಮಾರ್ಗ ರಚನೆ ವೇಳೆ ಉತ್ತರ ಕನ್ನಡದ ಭಾಗದಲ್ಲಿ ಗುಡ್ಡ ಅಗೆದು ಮತ್ತು ಗದ್ದೆಗಳಿಗೆ ಮಣ್ಣು ಹಾಕಿ ಮಾರ್ಗ ರಚನೆ ಮಾಡಿದ ಕಾರಣ ಪ್ರತೀ ವರ್ಷ ಜೂ. 10ರಿಂದ ಅಕ್ಟೋಬರ್‌ 30ರ ತನಕ ಬೈಂದೂರಿನಿಂದ ಕಾರವಾರದ ತನಕ ಪ್ರಯಾಣಿಕ ರೈಲು ಬಂಡಿ ವೇಗವನ್ನು ತಾಸಿಗೆ 40 ಕಿ. ಮೀ.ಗೆ ಇಳಿಸಲಾಗುತ್ತದೆ. ಇಲ್ಲದಿದ್ದರೆ 60 ಕಿ. ಮೀ.ಗೂ ಹೆಚ್ಚು ವೇಗದಲ್ಲಿ ಈ ರೈಲು ಮಾರ್ಗದಲ್ಲಿ ಪ್ರಯಾಣಿಕ ರೈಲುಗಳು ಓಡಲು ಅವಕಾಶವಿದೆ.
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಇನ್ನೂ ಮಂಜೂರಾತಿ ಸಿಕ್ಕಿಲ್ಲ.ತೋಕೂರು-ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದ ನಡುವಣ ದ್ವಿಪಥ ಹಳಿ ನಿರ್ಮಾಣ ಕಾಮಗಾರಿ ವಿಳಂಬವಾದ ಕಾರಣ ಈ ಭಾಗದಲ್ಲಿ 45 ನಿಮಿಷಗಳ ಕಾಲ ರೈಲು ಓಡಾಟ ವಿಳಂಬವಾಗುತ್ತಿದೆ.
ಹಾಸನ ಮತ್ತು ಮೈಸೂರು ರೈಲು ನಿಲ್ದಾಣಗಳಲ್ಲಿ ಎಂಜಿನ್‌ ತಿರುಗಿಸಲು ತಲಾ 40 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ಅವಧಿ ಅನಿವಾರ್ಯ ಯಾಕೆಂದರೆ ಇಲ್ಲಿ ಪ್ರಯಾಣಿಕ ರೈಲುಬಂಡಿ ಓಡಾಟದ ದಿಕ್ಕು ಬದಲಾಯಿಸುವ ಕಾರಣ ಎಂಜಿನ್‌ ತಿರುಗಿಸಲೇಬೇಕಾಗುತ್ತದೆ.
ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ-ಸಕಲೇಶಪುರ ನಡುವಣ ಘಾಟಿ ರಸ್ತೆಯಲ್ಲಿ ಪ್ರಯಾಣಿಕ ರೈಲು ವೇಗವನ್ನು ತಾಸಿಗೆ 40 ಕಿ.ಮೀ.ಗಳಿಗೆ ಏರಿಸಲು ರೈಲು ಮಾರ್ಗಕ್ಕೆ ಸುರಕ್ಷಾ ಆಯುಕ್ತರಿಂದ ಅನುಮತಿ ಸಿಕ್ಕಿಲ್ಲ. ರೈಲ್ವೇ ಮಾರ್ಗವನ್ನು ಇಲ್ಲಿ ಅಭಿವೃದ್ಧಿಪಡಿಸಿಲ್ಲ.
ಹಾಸನ-ಬೆಂಗಳೂರು ನಡುವಣ ನೇರ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡರೆ ಮಂಗಳೂರು-ಬೆಂಗಳೂರು ನಡುವಣ ರೈಲು ಪ್ರಯಾಣದ ದೂರ 47 ಕಿ.ಮೀ. ಕಡಿಮೆಯಾಗುತ್ತದೆ. ಹಾಸನದಲ್ಲಿ ರೈಲ್ವೇ ಎಂಜಿನ್‌ ತಿರುಗಿಸುವ ಪ್ರಮೇಯ ತಪ್ಪುತ್ತದೆ. ಸುತ್ತು ಬಳಸಿ ಹೋಗುವ ಪ್ರಯಾಣ ತಪ್ಪುತ್ತದೆ.
9 ಸಂಸದರ ಹೊಣೆಗಾರಿಕೆ
ಕಾರವಾರದಿಂದ ಒಂದು ರೈಲು, ಕಣ್ಣೂರಿನಿಂದ ಒಂದು ರೈಲು ಮಂಗಳೂರು ಸೆಂಟ್ರಲ್‌ಗೆ ಪ್ರತಿನಿತ್ಯ ಬರುತ್ತದೆ. ಎರಡೂ ರೈಲುಗಳ ಬೋಗಿಗಳನ್ನು ಜೊಡಿಸಿ ಮಂಗಳೂರಿನಿಂದ ಯಶವಂತಪುರಕ್ಕೆ ಪ್ರಯಾಣಿಕ ರೈಲು ಓಡುತ್ತದೆ. ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್‌ಗೆ ಪ್ರಯಾಣಿಕ ರೈಲು ಆಗಮಿಸಿದ ಬಳಿಕ ಎರಡು ತಾಸು ಕಾಲ ಕಾರವಾರದಿಂದ ಬರುವ ರೈಲಿಗೆ ಕಾಯಬೇಕು. ಕಾರವಾರದಿಂದ ಬರುವ ರೈಲು ವಿಳಂಬವಾದರೆ ಈ ಅವಧಿ ನಾಲ್ಕು ತಾಸುಗಳಿಗೆ ಏರುತ್ತದೆ.
ಈ ರೈಲು ಓಡಾಟದ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರು ಮತ್ತು ಕಾಸರಗೋಡು ಸಂಸದರು, ಕರ್ನಾಟಕದ ಕೆನರ, ಶಿವಮೊಗ್ಗ, ಉಡುಪಿ, ದ.ಕ., ಹಾಸನ, ಮೈಸೂರು, ರಾಮನಗರ ಸಂಸದರ ಹೊಣೆಗಾರಿಕೆ ಇದೆ. ಸಂಸದರು ಈ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುವುದು ಅಥವಾ ಪ್ರಯಾಣಿಸದೇ ಇರುವುದು ಅವರಿಗೆ ಬಿಟ್ಟ ವಿಷಯ. ಈ ರೈಲಿನಲ್ಲಿ ಪ್ರಯಾಣಿಸುವ ಜನ ಸಾಮಾನ್ಯರ ಸಮಯ ವ್ಯರ್ಥವಾಗುವುದನ್ನು ತಡೆಯುವುದು ಈ ಎಲ್ಲ ಸಂಸದರ ಸಾಮೂಹಿಕ ಹೊಣೆಗಾರಿಕೆ.
ಪ್ರಯಾಣಿಕರ ಹೊಣೆಗಾರಿಕೆ
ರೈಲು ಯಾನ ವಿಳಂಬದಂತಹ ಸಂದರ್ಭ ಅಧಿಕಾರಿಗಳನ್ನು ಎಚ್ಚರಿಸಲು ಜಾಗೃತ ಪ್ರಯಾಣಿಕರು ಸಾಮಾಜಿಕ ತಾಣ ಬಳಸುವ ಹೊಣೆಗಾರಿಕೆ ಪ್ರದರ್ಶಿಸಬೇಕಾಗಿದೆ. ಕೇಂದ್ರ ರೈಲ್ವೇ ಸಚಿವರ ಫೇಸ್‌ಬುಕ್‌ಗೆ ಅಂದರೆ ಇಂಡಿಯನ್‌ ರೈಲ್ವೇ ತಾಣಕ್ಕೆ ಈ ಕುರಿತು ಮಾಹಿತಿ ಅಪ್‌ಲೋಡ್‌ ಮಾಡಬೇಕು. ಕೇಂದ್ರ ಸರಕಾರದ ಕುಂದು ಕೊರತೆ ವಿಭಾಗದ ಪಿಜಿ ಪೋರ್ಟಲ್‌ಗೆ ಮಾಹಿತಿ ರವಾನೆ ಮಾಡಬೇಕು. ತಮ್ಮ ಭಾಗದ ಸಂಸದರಿಗೆ ಇಮೇಲ್‌ ಮಾಡುವ ಮತ್ತು ಅವರ ಮೇಲೆ ಒತ್ತಡ ಹೇರುವ ಕನಿಷ್ಠ ಜವಾಬ್ದಾರಿಯನ್ನು ಜಾಗೃತ ಪ್ರಯಾಣಿಕರು ಮಾಡಿದರೆ ರೈಲ್ವೇ ಇಲಾಖೆಯ ಇಂತಹ ಅಸಡ್ಡೆಗಳಿಗೆ ಪರಿಹಾರ ದೊರೆಯಲು ಸಾಧ್ಯ ಎಂದು ಪುತ್ತೂರು ರೈಲ್ವೇ ಯಾತ್ರಿಕರ ಸಂಘದ ಸಂಚಾಲಕ ಡಿ.ಕೆ. ಭಟ್‌ ಹೇಳಿದ್ದಾರೆ.
ಬೈಂದೂರು, ಮಂಗಳೂರು, ಪುತ್ತೂರುಗಳಲ್ಲಿ ರೈಲ್ವೇ ಯಾತ್ರಿಕರ ಸಂಘಗಳು ರೈಲ್ವೇ ಸೌಲಭ್ಯಗಳ ಕುಂದುಕೊರತೆ ಕುರಿತು ಸಾಮಾಜಿಕ ತಾಣ ಬಳಸಿಕೊಳ್ಳುತ್ತಿವೆ. ಆದರೆ ಪ್ರಯಾಣಿಕರು ಕೂಡ ತಮ್ಮ ಹೊಣೆಗಾರಿಕೆ ಅರಿತುಕೊಳ್ಳುವ ಅಗತ್ಯವಿದೆ. ಪ್ರತಿವಾರ ಕಾರವಾರ-ಯಶವಂತಪುರ ಮತ್ತು ಯಶವಂತಪುರ-ಕಾರವಾರ ರೈಲಿನಲ್ಲಿ ಪ್ರಯಾಣಿಸುತ್ತಿರುವ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್‌.ಎ. ನಾಯಕ್‌ ತಾನು ರೈಲ್ವೇ ಸಚಿವರ ಸಹಿತ ಈ ಭಾಗದ ಎಲ್ಲ ಸಂಸದರಿಗೆ ಸಮಸ್ಯೆ ಕುರಿತು ಮನವರಿಕೆ ಮಾಡುತ್ತೇನೆ. ಎಲ್ಲ ವರ್ಗದ ಪ್ರಯಾಣಿಕರ ಕಷ್ಟಗಳ ಕುರಿತು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
Read more at click here

Translate to English
Translate to Hindi

1389 views
1

Jun 29 2015 (09:15)
guest   40346 blog posts
Re# 1527338-1              
Translation
Translate to English
Translate to Hindi
Scroll to Top
Scroll to Bottom
Go to Desktop site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy